Untitled Document
Sign Up | Login    
Dynamic website and Portals
  

Related News

ಪ್ರಧಾನಿ ಮೋದಿ - ಬ್ರಿಟನ್ ನ ನೂತನ ಪ್ರಧಾನಿ ತೆರೆಸಾ ಮೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು, ಬ್ರಿಟನ್ ನ ನೂತನ ಪ್ರಧಾನಿ ತೆರೆಸಾ ಮೆ ಅವರನ್ನು ಭೇಟಿ ಮಾಡಿ ಶುಭಕೋರಿದರು. ಯುರೋಪಿಯನ್ ಒಕ್ಕೂಟದಿಂದ ಹೊರಬಂದ ಇಂಗ್ಲೆಂಡ್ ಜೊತೆ ದ್ವಿಪಕ್ಷೀಯ ಸಂಬಂಧ ವಿಸ್ತರಣೆ ಕುರಿತು ಮಾತುಕತೆ ನಡೆಸಿದರು. ಚೀನಾದ ಹಂಗ್ ಝೌ ನಲ್ಲಿ ನಡೆಯುತ್ತಿರುವ ಜಿ-20...

ಸಾರ್ಕ್ ಶೃಂಗ ಸಭೆ ವೇಳೆ ಪಾಕ್ ಜತೆ ದ್ವಿಪಕ್ಷೀಯ ಮಾತುಕತೆ ಇಲ್ಲ

ಆಗಸ್ಟ್ 4ರಂದು ಇಸ್ಲಾಮಾಬಾದ್​ನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆ ವೇಳೆ ಪಾಕಿಸ್ತಾನದ ಜೊತೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಯಾವುದೇ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟ ಪಡಿಸಿದೆ. ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಅವರು,...

ಅಮೆರಿಕಾ ತಲುಪಿದ ಪ್ರಧಾನಿ ನರೇಂದ್ರ ಮೋದಿ

ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾಗೆ ಭೇಟಿ ನೀಡಿದ್ದಾರೆ. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಹ್ವಾನದ ಮೇರೆಗೆ ಇಂದು ವಾಷಿಂಗ್ಟನ್ ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಎರಡು ದಿನಗಳ ಭೇಟಿಯಲ್ಲಿ ಅಮೆರಿಕಾದ ಜಂಟಿ ಸಂಸತ್ ಅನ್ನು ಉದ್ದೇಶಿಸಿ...

ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ನಿಗದಿ

ಕೊನೆಗೂ ಭಾರತ-ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿದೆ. ಏ.26 ರಂದು ಹಾರ್ಟ್ ಆಫ್ ಏಷ್ಯಾ ಸಮ್ಮೇಳನದ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಅಹ್ಮದ್ ಚೌಧರಿ ಹಾರ್ಟ್ ಆಫ್ ಏಷ್ಯಾ...

ಪ್ರಧಾನಿ ಮೋದಿಯವರಿಂದ ಮೂರು ರಾಷ್ಟ್ರಗಳ ಪ್ರವಾಸ

ಪ್ರಧಾನಿ ನರೇಂದ್ರ ಮೋದಿಯವರ ಮೂರು ರಾಷ್ಟ್ರಗಳ ಪ್ರವಾಸ ಮಂಗಳವಾರ ರಾತ್ರಿಯಿಂದ ಆರಂಭವಾಗಲಿದೆ. ಕಳೆದ ವಾರ ಭೀಕರ ಉಗ್ರ ದಾಳಿಗೆ ತುತ್ತಾದ ಬೆಲ್ಜಿಂಯಂ ರಾಜಧಾನಿ ಬ್ರಸೆಲ್ಸ್‌ ಗೆ ಮೋದಿ ಮೊದಲು ಭೇಟಿ ನೀಡಲಿದ್ದಾರೆ. ಬೆಲ್ಜಿಯಂನಲ್ಲಿ ಭಾರತ-ಯುರೋಪ್ ಒಕ್ಕೂಟ ಶೃಂಗಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಬೆಲ್ಜಿಯಂ...

ಶಾಂತಿ ಪಡೆಗಳನ್ನು ಒದಗಿಸುವ ದೇಶಗಳು ನಿರ್ಧಾರ ಕೈಗೊಳ್ಳುವಲ್ಲಿ ಸೂಕ್ತ ಪ್ರಾತಿನಿಧ್ಯ ಹೊಂದಿಲ್ಲ: ಪ್ರಧಾನಿ ಮೋದಿ

ತಮ್ಮ 5 ದಿನಗಳ ಅಮೆರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ಹಿಂದಿರುಗುವ ಮೊದಲು ಪ್ರಧಾನಿ ಮೋದಿ ವಿಶ್ವ ಶಾಂತಿಪಾಲನಾ ಶೃಂಗಸಭೆಯಲ್ಲಿ ಭಾಗವಹಿಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತರಬೇಕಾದ ಸುಧಾರಣೆಗಳ ಬಗ್ಗೆ ಮತ್ತೊಮ್ಮೆ ಒತ್ತಿ ಹೇಳಿದರು. ಕೊನೆಯ ದಿನದ ಪ್ರಮುಖಾಂಶಗಳುಃ * ದೊಡ್ಡ ಶಾಂತಿ ಪಡೆಗಳನ್ನು ಒದಗಿಸುವ...

ಒಬಮಾ ಮತ್ತು ಡೇವಿಡ್ ಕ್ಯಾಮರೂನ್ ಜೊತೆ ದ್ವಿಪಕ್ಷೀಯ ಮಾತುಕತೆಗೆ ನೂಯಾರ್ಕ್ ತಲುಪಿದ ಪ್ರಧಾನಿ ಮೋದಿ

ತಮ್ಮ ಎರಡು ದಿನದ ಸಿಲಿಕಾನ್ ವ್ಯಾಲಿ ಭೇಟಿ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ ತಲುಪಿದ್ದಾರೆ. ಸಿಲಿಕಾನ್ ವ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟೆಸ್ಲಾ, ಫೇಸ್ ಬುಕ್, ಗೂಗಲ್ ಕಂಪನಿಗಳಿಗೆ ಭೇಟಿ ನೀಡಿದ್ದರು. ಇದಲ್ಲದೇ ಆಪಲ್ ಸೇರಿದಂತೆ ಪ್ರಖ್ಯಾತ ಐಟಿ ಕಂಪನಿಗಳ...

ಮೋದಿ - ಷರೀಫ್ ದ್ವಿಪಕ್ಷೀಯ ಮಾತುಕತೆ : 60 ನಿಮಿಷಗಳ ಕಾಲ ನಡೆದ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಶುಕ್ರವಾರ ಉಫಾದಲ್ಲಿ ಭೇಟಿಯಾಗಿದ್ದು ಸುಮಾರು 60 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಇದೊಂದು ತುಂಬಾ ಫಲಪ್ರದವಾದ ಮಾತುಕತೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಎರಡೂ ದೇಶಗಳು ಪರಸ್ಪರ ಮಾತುಕತೆ ನಡೆಸಿ, ದೇಶಗಳ ಮಧ್ಯೆ...

ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತ ಸದಸ್ಯತ್ವ ಪಡೆಯುವ ಅಂಚಿನಲ್ಲಿದೆ: ಪುಟಿನ್

ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತ ಸದಸ್ಯತ್ವ ಪಡೆಯುವ ಅಂಚಿನಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ. ಬ್ರಿಕ್ಸ್ ಹಾಗೂ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸಲು ಬುಧವಾರ ರಷ್ಯಾದ ಉಫಾ ತಲುಪಿದ ಪ್ರಧಾನಿ ನರೇಂದ್ರ ಮೋದಿ,...

ಮಂಗೋಲಿಯಾಕ್ಕೆ 6300 ಕೋಟಿ ರೂ ಸಾಲ ಘೋಷಿಸಿದ ಪ್ರಧಾನಿ ಮೋದಿ

ಮಂಗೋಲಿಯಾಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಗೌರವಕ್ಕೆ ಪಾತ್ರರಾಗಿರುವ ನರೇಂದ್ರ ಮೋದಿ, ಆ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಬರೋಬ್ಬರಿ 1 ಶತಕೋಟಿ ಅಮೆರಿಕನ್‌ ಡಾಲರ್‌ (6300 ಕೋಟಿ ರೂ.) ಸಾಲ ಘೋಷಿಸಿದ್ದಾರೆ. ಮೂರು ದಿನಗಳ ಚೀನಾ ಪ್ರವಾಸ ಮುಗಿಸಿ...

ಚೀನಾದಲ್ಲಿ ಮೋದಿ: 10ಬಿಲಿಯನ್ ಡಾಲರ್ ಮೌಲ್ಯದ 24 ಮಹತ್ವದ ಒಪ್ಪಂದಗಳಿಗೆ ಸಹಿ

ಭಾರತ ಮತ್ತು ಚೀನಾ 10 ಬಿಲಿಯನ್ ಡಾಲರ್ ಮೌಲ್ಯದ 24 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಪ್ರಧಾನಿ ಲೀ ಕೆಕಿಯಾಂಗ್ ಬೀಜಿಂಗ್ ನಲ್ಲಿರುವ ಗ್ರೇಟ್ ಹಾಲ್ ಆಫ್ ಪೀಪಲ್ ನ ಸೌತ್ ಚೇಂಬರ್...

ಯಾವುದೇ ರಾಷ್ಟ್ರ ಉಗ್ರರಿಗೆ ಆಶ್ರಯ ನೀಡಬಾರದು: ಪ್ರಧಾನಿ ಮೋದಿ

2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್-ಇ-ತೊಯ್ಬಾ ಸಂಘಟನೆಯ ಕಮಾಂಡರ್ ಝಕೀ ಉರ್ ರೆಹಮಾನ್ ಲಖ್ವಿಯನ್ನು ಭಾರತದ ತೀವ್ರ ವಿರೋಧದ ನಡುವೆಯೂ ರಹಸ್ಯವಾಗಿ ಜೈಲಿನಿಂದ ಬಿಡುಗಡೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ...

ಫ್ರಾನ್ಸ್ ನಲ್ಲಿ ಪ್ರಧಾನಿ ಮೋದಿ: ನಾಗರಿಕ ಪರಮಾಣು ಒಪ್ಪಂದ, ವ್ಯಾಪಾರ ಮಹತ್ವದ ಅಜೆಂಡಾ

'ತ್ರಿರಾಷ್ಟ್ರಗಳ ಪ್ರವಾಸ' ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ ತಡರಾತ್ರಿ ಫ್ರ್ಯಾನ್ಸ್ ರಾಜಧಾನಿ ಪ್ಯಾರಿಸ್ ಗೆ ಬಂದಿಳಿದಿದ್ದಾರೆ. ವಿಶೇಷ ವಿಮಾನದಲ್ಲಿ ಉನ್ನತ ನಿಯೋಗದೊಂದಿಗೆ ಆಗಮಿಸಿದ ನರೇಂದ್ರಮೋದಿ ಅವರನ್ನು ಫ್ರಾನ್ಸ್‌ ಸಚಿವರು ಹಾಗೂ ಅಲ್ಲಿರುವ ಭಾರತದ ರಾಯಭಾರಿ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಪ್ರಧಾನಿ ಮೋದಿ...

ವಿಶ್ವಸಂಸ್ಥೆ ಜಗತ್ತನ್ನು ಒಂದಾಗಿರಿಸಿದೆ: ಪ್ರಧಾನಿ ನರೇಂದ್ರ ಮೋದಿ

ಸಂಸ್ಕೃತಿ ಎನ್ನುವುದು ಜಗತ್ತನ್ನು ಒಗ್ಗೂಡಿಸಬೇಕೆ ಹೊರತು, ವಿಭಜಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಫ್ರಾನ್ಸ್ ಪ್ರವಾಸದಲ್ಲಿರುವ ಮೋದಿ, ಏ.10ರಂದು ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಮಾತನಾಡಿ, ಜಗತ್ತನ್ನು ವಿಶ್ವಸಂಸ್ಥೆ ಒಂದಾಗಿಸಿದೆ. ವಿಶ್ವಸಂಸ್ಥೆಯ ಮಹತ್ವವನ್ನು ಭಾರತ ಅರಿತಿದ್ದು ಅದರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಲಿದೆ...

ಭಾರತ-ಪಾಕ್ ದ್ವಿಪಕ್ಷೀಯ ಮಾತುಕತೆ ಶೀಘ್ರವೇ ಪುನರಾರಂಭ: ಅಬ್ದುಲ್ ಬಸೀತ್

ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಸೀತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ-ಪಾಕಿಸ್ತಾನ ಪ್ರಧಾನಿಗಳ ಉದ್ದೇಶ ಒಂದೇ ಆಗಿದ್ದು, ಉಭಯ ದೇಶಗಳ ನಡುವಿನ ಮಾತುಕತೆ ಮುಂದುವರೆಸಲು ಇದು ಸೂಕ್ತ ಸಮಯ ಎಂದು ಬಸೀತ್...

ಮಾ.23ರಂದು ಪಾಕಿಸ್ತಾನ ದಿನವನ್ನು ಆಚರಿಸಲಿರುವ ಪ್ರತ್ಯೇಕತಾವಾದಿಗಳು

'ಕಾಶ್ಮೀರ' ಪ್ರತ್ಯೇಕತಾವಾದಿಗಳು ಮಾ.23ರಂದು ದೆಹಲಿಯಲ್ಲಿ ಪಾಕಿಸ್ತಾನ ದಿನವನ್ನು ಆಚರಿಸಲಿದ್ದಾರೆ. ನವದೆಹಲಿಯಲ್ಲಿರುವ ಚಾಣಕ್ಯಪುರಿಯಲ್ಲಿನ ಪಾಕಿಸ್ತಾನ ಹೈಕಮಿಷನ್ ನಲ್ಲಿ ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ಗಣತಂತ್ರ ದಿನವನ್ನು ಆಚರಿಸಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಾರ ಪಾಕ್ ನ ರಾಯಭಾರಿ ಅಬ್ದುಲ್ ಬಸಿತ್, ಕಾಶ್ಮೀರ ಪ್ರತ್ಯೇಕತಾವಾದಿ ಸಯೀದ್ ಶಾ...

ಪ್ರತ್ಯೇಕತಾವಾದಿ ಗಿಲಾನಿಯನ್ನು ಭೇಟಿ ಮಾಡಿದ ಪಾಕಿಸ್ತಾನ ಹೈಕಮಿಷನರ್

'ಪಾಕಿಸ್ತಾನ-ಭಾರತ'ದ ದ್ವಿಪಕ್ಷೀಯ ಮಾತುಕತೆ ಮುರಿದುಬಿದ್ದಿದ್ದರೂ, ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕನೊಂದಿಗೆ ಮಾತುಕತೆ ನಡೆಸಿದ್ದಾರೆ. ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸಯೀದ್ ಅಲಿ ಶಾ ಗಿಲಾನಿಯೊಂದಿಗೆ ಪಾಕ್ ಹೈಕಮಿಷನರ್ ಅಬ್ದುಲ್ ಬಸೀತ್ ಮಾತುಕತೆ ನಡೆಸಿದ್ದಕ್ಕಾಗಿಯೇ ಪಾಕಿಸ್ತಾನದೊಂದಿಗೆ ಭಾರತ ಸರ್ಕಾರ ದ್ವಿಪಕ್ಷೀಯ ಮಾತುಕತೆಯನ್ನು...

ಭಾರತ-ಶ್ರೀಲಂಕಾ ನಾಲ್ಕು ಮಹತ್ವದ ಒಪ್ಪಂದಕ್ಕೆ ಸಹಿ

ನಾಗರಿಕ ಪರಮಾಣು ಒಪ್ಪಂದ ಸೇರಿ ಭಾರತ-ಶ್ರೀಲಂಕಾ ಮಹತ್ವದ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ. ಶ್ರೀಲಂಕಾ ಅಧ್ಯಕ್ಷರಾಗಿ ಚುನಾಯಿತರಾದ ಬಳಿಕ ಮೈತ್ರಿಪಾಲ ಸಿರಿಸೇನಾ ಅವರು ತಮ್ಮ ಮೊದಲ ಭಾರತ ಪ್ರವಾಸವನ್ನು ಆರಂಭಿಸಿದ್ದು, ನಾಲ್ಕು ದಿನಗಳ ಭೇಟಿಗಾಗಿ ಆಗಮಿಸಿರುವ ಅವರು, ಪ್ರಧಾನಿ ಮೋದಿ ಅವರ...

ಭಾರತ-ಪಾಕ್ ದ್ವಿಪಕ್ಷೀಯ ಮಾತುಕತೆ ಇಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ಭಾರತ-ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯೀದ್ ಅಕ್ಬರುದ್ದೀನ್ ಸ್ಪಷ್ಟಪಡಿಸಿದ್ದಾರೆ. ನೇಪಾಳದ ಕಠ್ಮಂಡುವಿನಲ್ಲಿ ಆರಂಭವಾಗಿರುವ ಎರಡು ದಿನಗಳ 18ನೇ ಸಾರ್ಕ್ ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಔಪಚಾರಿಕ...

ಭಾರತದೊಂದಿಗೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಲು ಒಬಾಮಾಗೆ ಪಾಕ್ ಪ್ರಧಾನಿ ಮನವಿ

ವಿಶ್ವಸಂಸ್ಥೆಯಲ್ಲಿ ಮುಖಭಂಗ ಎದುರಿಸಿದ್ದರೂ, ಪಾಕಿಸ್ತಾನ ಕಾಶ್ಮೀರ ವಿಷಯದಲ್ಲಿ ಮತ್ತೆ ಕ್ಯಾತೆ ತೆಗೆದಿದೆ. ಅಮೆರಿಕಾ ಮೊರೆ ಹೋಗಿರುವ ಪಾಕ್ ಪ್ರಧಾನಿ ನವಾಜ್ ಷರೀಫ್, ಭಾರತದೊಂದಿಗೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವಂತೆ ಬರಾಕ್ ಒಬಾಮ ಅವರಲ್ಲಿ ಮನವಿ ಮಾಡಿದ್ದಾರೆ. ಬರಾಕ್ ಒಬಾಮ ಅವರ ಭಾರತ ಪ್ರವಾಸದಲ್ಲಿ...

ಗುಂಡಿನ ದಾಳಿ ನಿಲ್ಲುವವರೆಗೆ ಪಾಕ್ ನೊಂದಿಗೆ ಮಾತುಕತೆ ಇಲ್ಲ: ಕೇಂದ್ರ ಸಚಿವ ವಿ.ಕೆ ಸಿಂಗ್

'ಜಮ್ಮು-ಕಾಶ್ಮೀರ'ದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ನಿಲ್ಲುವವರೆಗೂ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ ಸಿಂಗ್ ಹೇಳಿದ್ದಾರೆ. ಗಡಿಯಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನ, ತನ್ನೊಂದಿಗೆ ಭಾರತ ದ್ವಿಪಕ್ಷೀಯ ಮಾತುಕತೆ...

ಕಾಶ್ಮೀರ ವಿಷಯದಲ್ಲಿ ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನ

'ಕಾಶ್ಮೀರ' ವಿಷಯದಲ್ಲಿ ಪಾಕಿಸ್ತಾನ ಮತ್ತೊಮ್ಮೆ ತಗಾದೆ ತೆಗೆದಿದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಯಶಸ್ವಿಯಾಗಿರುವ ಬೆನ್ನಲ್ಲೇ ಪಾಕಿಸ್ತಾನ, ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದು ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆ ಮಾಡಬೇಕೆಂದು ಹೇಳಿದ್ದಾರೆ. ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರೆ ತಸ್ಲೀಮ್...

ಪ್ರಧಾನಿ ಮೋದಿ-ಒಬಾಮ ಭೇಟಿ: ಸ್ಮಾರ್ಟ್ ಸಿಟಿಗೆ ನೆರವು

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಇದೀಗ ಅಮೆರಿಕಾ ಕೂಡ ನೆರವು ನೀಡಲಿದೆ. ಅಲಹಾಬಾದ್, ಅಜ್ಮೀರ್ ಮತ್ತು ವಿಶಾಖಪಟ್ಟಣಂ ನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಅಮೆರಿಕಾ ಸಹಾಯ ನೀಡಲಿದೆ. ಶ್ವೇತಭವನದಲ್ಲಿ ಸೆ.30ರಂದು ಸುಮಾರು 90 ನಿಮಿಷಗಳ ಕಾಲ ಭಾರತ ಪ್ರಧಾನಿ...

ಅಮೆರಿಕಾ ಕಂಪನಿಗಳ ಜತೆ ಪ್ರಧಾನಿ ಮೋದಿ ಸಭೆ

ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾದ ಪ್ರಮುಖ 11 ಕಂಪನಿಗಳ ಸಿಇಒಗಳ ಜತೆ ಸಭೆ ನಡೆಸಿದ್ದಾರೆ. ಭಾರತದ ಮೂಲಸೌಕರ್ಯ ಅಭಿವೃದ್ಧಿಗಾಗಿ ಹೂಡಿಕೆ ಮಾಡಿ, ಅದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಜೀವನ ಗುಣಮಟ್ಟ ಹೆಚ್ಚುತ್ತದೆ ಎಂದು ಕಂಪನಿಗಳ ಮನವೊಲಿಕೆ ಯತ್ನ ನಡೆಸಿದರು. ಮೋದಿ ಜತೆ ಸಭೆಯಲ್ಲಿ...

ಪ್ರಧಾನಿ ಮೋದಿಗೆ ಒಬಾಮ ಔತಣಕೂಟ

5 ದಿನಗಳ ಅಮೆರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಖಾಸಗಿ ಔತಣಕೂಟ ಆಯೋಜಿಸಿದ್ದಾರೆ. ಸೆ.29ರಂದು ಸಂಜೆ ಅಂದರೆ ಭಾರತೀಯ ಕಾಲಮಾನದ ಪ್ರಕಾರ ಸೆ.30ರಂದು ನಸುಕಿನಜಾವ ಔತಣಕೂಟ ಆಯೋಜಿಸಿದ್ದು, ಈ ವೇಳೆ ಉಭಯ ನಾಯಕರು ಲೋಕಾಭಿರಾಮವಾಗಿ ಮಾತುಕತೆ...

ಅಮೆರಿಕಾ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ 5 ದಿನಗಳ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದಾರೆ. ದೆಹಲಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಪ್ರಧಾನಿ ಮೋದಿ ತಮ್ಮ ಪ್ರವಾಸ ಆರಂಭಿಸಿದ್ದಾರೆ. ಐದು ದಿನಗಳ ತಮ್ಮ...

ದ್ವಿಪಕ್ಷೀಯ ಮಾತುಕತೆ ಬೆನ್ನಲ್ಲೇ ಚೀನಾ ಸೈನಿಕರು ಗಡಿ ಬಿಟ್ಟು ಓಡುವಂತೆ ಮೋದಿ ಮಾಡಿದ್ದೇನು?

ಅತ್ತ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್-ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಮುಗಿಯುತ್ತಿದ್ದಂತೆಯೇ ಇತ್ತ ಲಡಾಕ್ ನ ಅಂತರಾಷ್ಟ್ರೀಯ ಗಡಿಯಲ್ಲಿ ಜಮಾವಣೆಯಾಗಿದ್ದ ಚೀನಾ ಸೈನಿಕರು ಭಾರತದಿಂದ ಕಾಲ್ಕಿತ್ತ ಘಟನೆ ದೇಶದ ಗಮನ ಸೆಳೆದಿದೆ. ಚೀನಾ ಹಾಗೂ ಭಾರತ ನಡುವಿನ...

ರಾಷ್ಟ್ರಪತಿ ಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ದೂರಿ ಸ್ವಾಗತ

ಮೂರು ದಿನಗಳ ಭಾರತದ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಈ ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟದ ಸದಸ್ಯರು ಉಪಸ್ಥಿತರಿದ್ದರು. ರಾಷ್ಟ್ರಪತಿ ಭೇಟಿ ಬಳಿಕ...

ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆ: 12 ಒಪ್ಪಂದಗಳಿಗೆ ಸಹಿ

ಭಾರತ-ಚೀನಾ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆ ಮುಕ್ತಾಯವಾಗಿದೆ. ಉಭಯ ದೇಶಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಮ್ಮುಖದಲ್ಲಿ ಒಟ್ಟು 12 ಮಹತ್ವದ ಒಪ್ಪಂದಗಳಿಗೆ ಸಹಿಹಾಕಿವೆ. ನವದೆಹಲಿಯ ಹೈದ್ರಾಬಾದ್ ಹೌಸ್ ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

ಚೀನಾದಿಂದ ಗಡಿ ಅತಿಕ್ರಮಣ: ಚೀನಾ ಭಾಷೆಯಲ್ಲೇ ಉತ್ತರಿಸುವಂತೆ ಮೋದಿಗೆ ಎಸ್.ಪಿ ಒತ್ತಾಯ

ದ್ವಿಪಕ್ಷೀಯ ಮಾತುಕತೆ ನಡುವೆಯೇ ಗಡಿ ಭಾಗದಲ್ಲಿ ಆಕ್ರಮಣ ಮಾಡುವ ಚೀನಾ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಸಮಾಜವಾದಿ ಪಕ್ಷದ ನಾಯಕರು ಎಚ್ಚರಿಸಿದ್ದಾರೆ. ಸೆ.18ರಂದು ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿರುವ...

ಟಿಬೆಟ್ ಸಮಸ್ಯೆ ಭಾರತದ ಸಮಸ್ಯೆಯೂ ಹೌದು: ದಲೈಲಾಮ

'ಟಿಬೇಟ್' ಸಮಸ್ಯೆ ಭಾರತದ ಸಮಸ್ಯೆ ಕೂಡ ಆಗಿದೆ ಎಂದು ಟಿಬೇಟ್ ಧರ್ಮ ಗುರು ದಲೈಲಾಮ ಹೇಳಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ನಡೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ದಲೈಲಾಮ, ಟಿಬೇಟ್...

ಭಾರತಕ್ಕೆ ಆಗಮಿಸಿದ ಚೀನಾ ಅಧ್ಯಕ್ಷ: ಮಹತ್ವದ ಮೂರು ಒಪ್ಪಂದಗಳಿಗೆ ಸಹಿ

ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಹಮದಾಬಾದ್ ನ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಪತ್ನಿ ಹಾಗೂ ಸರ್ಕಾರದ ಇತರ ಅಧಿಕರಿಗಳೊಂದಿಗೆ ಆಗಮಿಸಿದ ಜಿನ್ ಪಿಂಗ್ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ವಿಮಾನ ನಿಲ್ದಾಣದಿಂದ ಖಾಸಗಿ ಹೋಟೆಲ್ ಗೆ ತರಳಲಿರುವ...

ಒಂದೇ ಭಾರತ ನೀತಿಯನ್ನು ಚೀನಾ ಒಪ್ಪಿಕೊಳ್ಳಲಿ: ಸುಷ್ಮಾ ಸ್ವರಾಜ್

ಒಂದೇ ಚೀನಾ ನೀತಿಯನ್ನು ಭಾರತ ಒಪ್ಪಿಕೊಳ್ಳಬೇಕದರೆ, ಚೀನಾ ಕೂಡ ಒಂದೇ ಭಾರತ ನೀತಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಮೂಲಕ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿಗೂ ಮೊದಲೇ ಭಾರತ ದ್ವಿಪಕ್ಷೀಯ ಮಾತುಕತೆ...

ಕಹಿ ವಾತಾವರಣ ಅಳಿಸಲು ಪ್ರಧಾನಿ ಮೋದಿಗೆ ಸಿಹಿ ಮಾವು ಕಳಿಸಿದ ನವಾಜ್ ಷರೀಫ್

ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಸಿಹಿ ಮಾವಿನ ಹಣ್ಣು ನೀಡುವ ಮೂಲಕ ಓಲೈಕೆಗೆ ಮುಂದಾಗಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಸಂಘರ್ಷ, ಇನ್ನೊಂದೆಡೆ ಕಾಶ್ಮೀರಿ ಪ್ರತ್ಯೇಕವಾದಿಗಳನ್ನು ಭೇಟಿ ಮಾಡಿದ ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್‌...

ಪಾಕ್ ಭಯೋತ್ಪಾದನೆ ನಡುವೆ ಶಾಂತಿ ಮಾತುಕತೆ ಅಸಾಧ್ಯ: ರಾಜನಾಥ್ ಸಿಂಗ್

'ಪಾಕಿಸ್ತಾನ' ಭಯೋತ್ಪಾದನೆ ನಿಲ್ಲಿಸುವವರೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಪಾಕ್ ನೊಂದಿಗೆ ನಡೆಯಬೇಕಿದ್ದ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಸಭೆಯನ್ನು ಭಾರತ ರದ್ದುಪಡಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವರು ಸದ್ಯದಲ್ಲೇ ಪಾಕ್ ಗೃಹ...

ಜಪಾನ್-ಭಾರತ ದ್ವಿಪಕ್ಷೀಯ ಸಂಬಂಧ ವಿಶ್ವದಲ್ಲೇ ಪ್ರಭಾವಶಾಲಿಯಾಗಲಿದೆ-ನರೇಂದ್ರ ಮೋದಿ

'ಜಪಾನ್-ಭಾರತ'ದ ದ್ವಿಪಕ್ಷೀಯ ಸಂಬಂಧ ವಿಶ್ವದಲ್ಲೇ ಪ್ರಭಾವಶಾಲಿ ಸಂಬಂಧವಾಗಲಿದೆ ಎಂದು ಜಪಾನ್ ರಾಜಧಾನಿ ಟೋಕಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಪಾನ್ ಪ್ರವಾಸದಲ್ಲಿರುವ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು...

ಕಾಶಿ ಸ್ಮಾರ್ಟ್ ಸಿಟಿ ಒಪ್ಪಂದಕ್ಕೆ ಸಹಿ: ಸೆ.1ರಂದು ದ್ವಿಪಕ್ಷೀಯ ಮಾತುಕತೆ

ಜಪಾನ್ ಪ್ರವಾಸದಲಿರುವ ಪ್ರಧಾನಿ ನರೇಂದ್ರ ಮೋದಿ, ವಾರಾಣಸಿಯನ್ನು ಜಪಾನ್ ನ ದೇಗುಲ ನಗರಿ ಕ್ಯೋಟೋ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಸ್ಮಾರ್ಟ್ ಸಿಟಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕ್ಯೋಟೋದ ಅನುಭವವನ್ನು ಬಳಸಿಕೊಂಡು ಭಾರತದ ಪುಣ್ಯ ಕ್ಷೇತ್ರವಾಗಿರುವ ವಾರಾಣಸಿಯನ್ನು ಅಭಿವೃದ್ಧಿಪಡಿಸುವುದು ಈ ಒಪ್ಪಂದದ ಉದ್ದೇಶವಾಗಿದೆ. ಪ್ರಧಾನಿ...

ಜಪಾನ್ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ

ದ್ವಿಪಕ್ಷೀಯ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು 6ದಿನಗಳ ಜಪಾನ್ ಪ್ರವಾಸಕ್ಕೆ ತೆರಳಿದ್ದಾರೆ. ಪ್ರಧಾನಿ ಮೋದಿ ಜಪಾನ್ ಭೇಟಿ ಜಾಗತಿಕ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಬೆಳಿಗ್ಗೆ 6ಗಂಟೆಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಮೋದಿ,...

ಪಾಕ್ ನೊಂದಿಗೆ ಕೇಂದ್ರ ಸರ್ಕಾರ ದ್ವಿಪಕ್ಷೀಯ ಮಾತುಕತೆ ಮುಂದುವರೆಸಬೇಕು- ಮೆಹಬೂಬ ಮುಫ್ತಿ

'ರಕ್ಷಣಾ ಸಚಿವ'ರ ಮಟ್ಟದಲ್ಲಿ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಬೇಕೆಂದು ಜಮ್ಮು-ಕಾಶ್ಮೀರದ ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬ ಮುಫ್ತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆ.29ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಮಾಧ್ಯಮ ಸಮ್ಮೇಳನವದಲ್ಲಿ ಭಾಗವಹಿಸಿ ಮಾತನಾಡಿದ ಮೆಹಬೂಬ ಮುಫ್ತಿ, ಪಾಕಿಸ್ತಾನ ಹಾಗೂ ಭಾರತದ ನಡುವಿನ...

ಪ್ರಧಾನಿ ಮೋದಿ ಮುಸ್ಲಿಂ ವಿರೋಧಿ: ಪಾಕ್ ಮಾಜಿ ಅಧ್ಯಕ್ಷ ಮುಷರಫ್

ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಹಾಗೂ ಪಾಕಿಸ್ತಾನ ವಿರೋಧಿ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪರ್ವೇಜ್ ಮುಷರಫ್ ಆರೋಪಿಸಿದ್ದಾರೆ. ರಾಷ್ಟ್ರದ್ರೋಹಕ್ಕೆ ಸಂಬಂಧಪಟ್ಟ ಪ್ರಕರಣವನ್ನು ಎದುರಿಸುತ್ತಿರುವ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರವೇಜ್ ಮುಷರಫ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನುಚಿತ ಭಾಷೆಯಿಂದ...

ಬುದ್ದಿ ಕಲಿಯದ ಪಾಕಿಸ್ತಾನ: ಗಡಿಯಲ್ಲಿ ಮತ್ತೊಮ್ಮೆ ಗುಂಡಿನ ದಾಳಿ

ದ್ವಿಪಕ್ಷೀಯ ಮಾತುಕತೆ ರದ್ದುಗೊಳಿಸಿದ್ದರೂ ಬುದ್ದಿ ಕಲಿಯದ ಪಾಕಿಸ್ತಾನ, ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಆ.21ರ ನಡುರಾತ್ರಿ ಜಮ್ಮು-ಕಾಶ್ಮೀರದ ಆರ್.ಎಸ್ ಪುರ ಸೆಕ್ಟರ್ ನಲ್ಲಿ 2 ಬಿ.ಎಸ್.ಎಫ್ ತುಕಡಿಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಯೋಧರು...

ಅಮೆರಿಕಾದಲ್ಲಿ ಮೋದಿ-ನವಾಜ್ ಷರೀಫ್ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ ಕ್ಷೀಣ?

'ಅಮೆರಿಕ ಪ್ರವಾಸ' ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಭೇಟಿ ಮಾಡುವ ಸಾಧ್ಯತೆಗಳು ಕ್ಷೀಣಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸೀತ್, ಅಮೆರಿಕಾದಲ್ಲಿ ನವಾಜ್ ಷರೀಫ್-ನರೇಂದ್ರ ಮೋದಿ ಭೇಟಿಗೆ ಕಾರ್ಯಕ್ರಮ ನಿಗದಿಯಾಗಿಲ್ಲ...

ಭಾರತ-ಪಾಕ್ ಮಾತುಕತೆ ರದ್ದು ನಿರ್ಧಾರ ಬಾಲಿಶ, ಪ್ರಜಾಪ್ರಭುತ್ವ ವಿರೋಧಿ:ಸೈಯದ್ ಶಾ

ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಆ.25ರಂದು ನಡೆಯಬೇಕಿದ್ದ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸಿರುವ ಭಾರತ ಸರ್ಕಾರದ ನಿರ್ಧಾರ ಬಾಲಿಶವಾದದ್ದು ಎಂದು ಕಾಶ್ಮೀರ ಪ್ರತ್ಯೇಕವಾದಿ, ಹುರಿಯತ್ ಸಂಘಟನೆಯ ಮುಖಂಡ ಸೈಯದ್ ಶಾ ಗಿಲಾನಿ ಟೀಕಿಸಿದ್ದಾರೆ. ಗಡಿ ಭಾಗದಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುವುದೂ...

ದ್ವಿಪಕ್ಷೀಯ ಮಾತುಗತೆಗಳಿಂದ ಕಾಶ್ಮೀರ ಸಮಸ್ಯೆ ಬಗೆಹರಿಯಲ್ಲ: ಶಬ್ಬೀರ್ ಅಹ್ಮದ್ ಷಾ

ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆಗಳಿಂದ ಮಾತ್ರ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಪ್ರತ್ಯೇಕತಾವಾದಿ ಸಂಘಟನೆಯ ನಾಯಕ ಶಬ್ಬೀರ್ ಅಹ್ಮದ್ ಷಾ ಅಭಿಪ್ರಾಯ ಪಟ್ಟಿದ್ದಾರೆ. ಕಾಶ್ಮೀರ ಸಮಸ್ಯೆ ಬಗೆಹರಿಯಬೇಕಾದರೆ ಪ್ರಮುಖವಾಗಿ ಕಾಶ್ಮೀರದ ಜನತೆ ಇದರಲ್ಲಿ ಪಾತ್ರವಹಿಸಬೇಕು. ಭಾರತ-ಪಾಕಿಸ್ತಾನ ನಡುವೆ ಮಾತುಕತೆಗಳು ನಡೆಯುವುದನ್ನು...

ದ್ವಿಪಕ್ಷೀಯ ಮಾತುಕತೆ ರದ್ದು: ಪಾಕಿಸ್ತಾನಕ್ಕೆ ಮೋದಿ ಕಠಿಣ ಸಂದೇಶ

ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಶಬೀರ್ ಶಾ ಜೊತೆ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಷೀತ್ ಮಾತುಕತೆ ನಡೆಸಿದ ಬೆನ್ನಲ್ಲೇ, ಪಾಕಿಸ್ತಾನದೊಂದಿಗೆ ನಡೆಯಬೇಕಿದ್ದ ವಿದೇಶಾಂಗ ಕಾರ್ಯದರ್ಶಿ ಮಟ್ಟದ ದ್ವಿಪಕ್ಷೀಯ ಮಾತುಕತೆಗೆ ಭಾರತ ಸರ್ಕಾರ ಬ್ರೇಕ್ ಹಾಕಿದೆ. ಪಾಕಿಸ್ತಾನದ ರಾಯಭಾರಿಯೊಂದಿಗೆ ಆ.25ರಂದು ನಡೆಯಬೇಕಿದ್ದ ದ್ವಿಪಕ್ಷೀಯ ಮಾತುಕತೆಯನ್ನು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited